Article Abstract
International Journal of Trends in Emerging Research and Development, 2025;3(4):171-174
ಕುಮಾರವ್ಯಾಸ ಚಿತ್ರಿಸಿದ ಕರ್ಣನ ಸ್ವಾಮಿ ನಿಷ್ಠೆ
Author : ಡಾ. ಮಂಜುನಾಥ ಎಂ ಎಂ
Abstract
ಹಲ್ಮಿಡಿ ಶಾಸನದಿಂದ ಆರಂಭವಾಗುವ ಕನ್ನಡ ಸಾಹಿತ್ಯ ಪರಂಪರೆ ಕ್ರಮೇಣ ಮಹಾಕಾವ್ಯ, ವಚನ ಹಾಗೂ ಭಕ್ತಿ ಸಾಹಿತ್ಯದ ಮೂಲಕ ವಿಕಸನಗೊಂಡಿದೆ. ಈ ಸಾಹಿತ್ಯ ಪ್ರವಾಹದಲ್ಲಿ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ವಿಶೇಷ ಸ್ಥಾನವನ್ನು ಹೊಂದಿದೆ. ಪಂಪನ ನಂತರ ವ್ಯಾಸಭಾರತವನ್ನು ಸಮಗ್ರವಾಗಿ ಕನ್ನಡಕ್ಕೆ ತರುವ ಮಹತ್ವದ ಕಾರ್ಯವನ್ನು ಕುಮಾರವ್ಯಾಸ ನೆರವೇರಿಸಿದ್ದಾನೆ. ನಡುಗನ್ನಡದಲ್ಲಿ, ಭಾಮಿನಿ ಷಟ್ಪದಿ ಎಂಬ ಜಾನಪದೀಯ ಗೇಯಶೈಲಿಯನ್ನು ಬಳಸಿಕೊಂಡು ಆತ ಕಾವ್ಯವನ್ನು ಪುನರ್ರಚನೆಗೊಳಿಸಿದ್ದಾನೆ. ಈ ಕೃತಿಯಲ್ಲಿ ಕೃಷ್ಣ, ಭೀಷ್ಮ, ಅರ್ಜುನ ಮುಂತಾದ ಪಾತ್ರಗಳೊಂದಿಗೆ ವಿಶೇಷವಾಗಿ ಕರ್ಣನ ಸ್ವಾಮಿನಿಷ್ಠೆ, ತ್ಯಾಗ, ಸತ್ಯನಿಷ್ಠೆ ಮತ್ತು ಮಾನವೀಯ ಮೌಲ್ಯಗಳನ್ನು ಕವಿಯು ಆಳವಾಗಿ ಚಿತ್ರಿಸಿದ್ದಾನೆ. ಉದ್ಯೋಗಪರ್ವದ ಸಂದರ್ಭದಲ್ಲಿ ಕೃಷ್ಣನು ನೀಡಿದ ರಾಜ್ಯ, ಅಧಿಕಾರ ಮತ್ತು ಐಶ್ವರ್ಯದ ಆಮಿಷವನ್ನೂ ತಿರಸ್ಕರಿಸಿ ದುರ್ಯೋಧನನಿಗೆ ನಿಷ್ಠನಾಗಿ ಉಳಿಯುವ ಕರ್ಣನ ವ್ಯಕ್ತಿತ್ವವು ಕುಮಾರವ್ಯಾಸನ ಕಾವ್ಯ ಪ್ರತಿಭೆಯನ್ನು ಸ್ಪಷ್ಟವಾಗಿ ಅನಾವರಣಗೊಳಿಸುತ್ತದೆ. ಈ ಅಧ್ಯಯನವು ಕನ್ನಡ ಭಕ್ತಿ ಪರಂಪರೆಯ ಹಿನ್ನೆಲೆಯಲ್ಲಿ ಕುಮಾರವ್ಯಾಸನ ಕಾವ್ಯದಲ್ಲಿನ ಕರ್ಣನ ಸ್ವಾಮಿನಿಷ್ಠೆಯ ಮಹತ್ವವನ್ನು ವಿಶ್ಲೇಷಿಸುವ ಪ್ರಯತ್ನವಾಗಿದೆ.
Keywords
ಹಲ್ಮಿಡಿ ಶಾಸನ, ಕನ್ನಡ ಸಾಹಿತ್ಯ ಪರಂಪರೆ, ಕುಮಾರವ್ಯಾಸ, ಕರ್ಣಾಟ ಭಾರತ ಕಥಾಮಂಜರಿ, ಭಕ್ತಿ ಮಾರ್ಗ, ಭಾಮಿನಿ ಷಟ್ಪದಿ, ಕರ್ಣನ ಸ್ವಾಮಿನಿಷ್ಠೆ, ನಡುಗನ್ನಡ, ಮಹಾಕಾವ್ಯ