Browse Categories

Abstract

International Journal of Trends in Emerging Research and Development, 2025;3(6):80-83

ಸಾಗರತಟದ ಅಚಲ ಶಕ್ತಿ: ಉಳ್ಳಾಲದ ರಾಣಿ ಅಬ್ಬಕ್ಕ ದೇವಿ

Author : Dr. Shaila KN

Abstract

ಕರಾವಳಿ ಕರ್ನಾಟಕದ ಉಳ್ಳಾಲವನ್ನು ಆಳಿದ ರಾಣಿ ಅಬ್ಬಕ್ಕ ದೇವಿ ವಸಾಹತುಶಾಹಿ ಶಕ್ತಿಗಳಿಗೆ ಸವಾಲೊಡ್ಡಿದ ಅಪೂರ್ವ ವೀರಾಂಗನೆಯೂ ಹೌದು. ವಿಭಿನ್ನ ಜಾತಿ–ಧರ್ಮಗಳ ಜನರನ್ನು ಒಗ್ಗೂಡಿಸಿಕೊಂಡು, ಆರ್ಥಿಕ ಸ್ವಾವಲಂಬನೆ ಮತ್ತು ರಾಜಕೀಯ ಸ್ವಾಭಿಮಾನವನ್ನು ಕಾಪಾಡುವಲ್ಲಿ ಅಬ್ಬಕ್ಕ ದೇವಿಯ ಪಾತ್ರ ವಿಶಿಷ್ಟವಾಗಿದೆ. ಪೋರ್ಚುಗೀಸರು ಕರಾವಳಿ ಕರ್ನಾಟಕದಲ್ಲಿ ವ್ಯಾಪಾರ ವಹಿವಾಟಿನ ಮೂಲಕ ಆರ್ಥಿಕ ಶೋಷಣೆಗೆ ಯತ್ನಿಸಿದಾಗ, ಕಪ್ಪ ಕಾಣಿಕೆ ಹಾಗೂ ತೆರಿಗೆಗಳನ್ನು ತಿರಸ್ಕರಿಸಿ ಜನಬೆಂಬಲದೊಂದಿಗೆ ಆಕೆ ದಿಟ್ಟ ಪ್ರತಿರೋಧವನ್ನು ಸಂಘಟಿಸಿದಳು. ವಿದೇಶಿ ಪ್ರವಾಸಿಗರ ವರದಿಗಳು ಮತ್ತು ಪೋರ್ಚುಗೀಸ್ ದಾಖಲೆಗಳ ಆಧಾರದಲ್ಲಿ ಅಬ್ಬಕ್ಕ ದೇವಿಯರ ಆಡಳಿತ, ಅವರ ರಾಜಕೀಯ ಚಾತುರ್ಯ ಮತ್ತು ಜನಪರ ನಿಲುವುಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಈ ಲೇಖನವು ಅಬ್ಬಕ್ಕ ದೇವಿಯನ್ನು ಕೇವಲ ವಸಾಹತು ವಿರೋಧಿ ಹೋರಾಟಗಾರ್ತಿಯಾಗಿ ಮಾತ್ರವಲ್ಲದೆ, ಆರ್ಥಿಕ ಶೋಷಣೆ, ರಾಜಕೀಯ ದಬ್ಬಾಳಿಕೆ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿದ ಸ್ವಾಭಿಮಾನಿಯಾಗಿ ವಿವಿಧ ಮಜಲುಗಳನ್ನು ಅನಾವರಣಗೊಳಿಸುತ್ತದೆ.

Keywords

ರಾಣಿ ಅಬ್ಬಕ್ಕ ದೇವಿ, ಚೌಟ ವಂಶ, ಉಳ್ಳಾಲ, ಕರಾವಳಿ ಕರ್ನಾಟಕ, ಪೋರ್ಚುಗೀಸರು, ವಸಾಹತುಶಕ್ತಿ, ವಿದೇಶಿ ವ್ಯಾಪಾರ, ಸ್ವಾಭಿಮಾನ